ಇಂಡಿ-
 	
ಬಿಜಾಪುರ ಜಿಲ್ಲೆಯ ಉತ್ತರಭಾಗದಲ್ಲಿರುವ ಒಂದು ತಾಲ್ಲೂಕು. ವಿಸ್ತೀರ್ಣ 854 ಚ. ಮೈ. ಪಶ್ಚಿಮಘಟ್ಟಗಳ ಮಳೆನೆರಳಿನ ಪ್ರದೇಶದಲ್ಲಿರುವುದರಿಂದ ಮಳೆ ಕಡಿಮೆ. ಸರಾಸರಿ ವಾರ್ಷಿಕ ಮಳೆ ಪ್ರಮಾಣ ಸು. 24". ಬೇಸಿಗೆಯಲ್ಲಿ ಸೆಕೆ ಹೆಚ್ಚು. ಉಷ್ಣತೆ ಕೇಲವು ಸಲ 460 ಸೆ. ಮುಟ್ಟುವುದೂ ಉಂಟು. ಜನ ಸಂಖ್ಯೆ ಸು. ಎರಡು ಲಕ್ಷ. ಸು. 21% ಜನ ಅಕ್ಷರಸ್ತರು. ತಾಲ್ಲೂಕಿನಲ್ಲಿ 6 ಫ್ರೌಢ ಶಾಲೆಗಳು, ಸು. 239 ಪ್ರಾಥಮಿಕ ಶಾಲೆಗಳು ಮತ್ತು ಒಂದು ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಕೇಂದ್ರವೂ ಇವೆ. ತಾಲ್ಲೂಕಿನಲ್ಲಿ ಭೀಮಾನದಿ ಹರಿಯುತ್ತದೆ. ಪ್ರಮುಖ ವೃತ್ತಿ ವ್ಯವಸಾಯ. ಗೋಧಿ, ಹತ್ತಿ ಮತ್ತು ಶೇಂಗ ಪ್ರಮುಖ ವ್ಯವಸಾಯೋತ್ಪನ್ನಗಳು. ಈ ತಾಲ್ಲೂಕಿನ ಜನಸಂಖ್ಯೆ 3,56,768 (2001).
ಆಡಳಿತ ಕೇಂದ್ರ ಇಂಡಿ. ಇಂಡಿರೋಡ್ ರೈಲುನಿಲ್ದಾಣದಿಂದ 3ಳಿ ಮೈಲಿ ದೂರದಲ್ಲಿದೆ. ಇಲ್ಲಿಯ ಶಾಂತೇಶ್ವರ ದೇವಸ್ಥಾನ ಬಹು ಪ್ರಸಿದ್ಧವಾದುದು. ಗೋಪುರ ಅಷ್ಟಮುಖಗಳಿಂದ ಕೂಡಿದ್ದು ಸುಂದರ ಶಿಲ್ಪಗಳನ್ನು ಒಳಗೊಂಡಿದೆ. ಪಟ್ಟಣದಲ್ಲಿ ಎರಡು ಪ್ರೌಢಶಾಲೆಗಳಿವೆ.									
	(ಎಂ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ